ನಗುಮೊಗದೊಡೆಯನಿಗೆ ಪ್ರೀತಿಯ ಅಪ್ಪುಗೆ

ನಗುಮೊಗದೊಡೆಯನ ಜನುಮದಿನ

ಸ್ಮರಿಸುತ ನೆನದು ತುಂಬಿ ಮನ..

ನಡೆ‌ ನುಡಿ ಗಳಲ್ಲೂ ಸರಳತೆಯನ್ನ

ಸಾರಿದ ಕರುನಾಡ ಪ್ರೇಮದ ಕಾಣಿಕೆಯನ್ನ

ಕಳೆದುಕೊಂಡ ಮನಗಳು ಹುಡುಕುವು ಪ್ರತಿಕ್ಷಣ

ನಿಮ್ಮ ನಗುಮೊಗವನ್ನ.


ನೀತಿಗಳ ಪಾಠ ನೀವು...ಮೌಲ್ಯಗಳ ಸಾರ

ತುಂಬಿದ ಕೊಡದ ಹಾಗೆ...ತುಳುಕಾಡದ ಕುವರ


ಕರುನಾಡಲೆಂದು‌‌ ನಿಮ್ಮ ನೆನಪು‌ ಅಮರ

ಇರುವವರೆಗೂ‌ ಆ ಸೂರ್ಯ ಚಂದಿರ.


ನಗುಮೊಗದೊಡೆಯನ ಜನುಮದಿನ

ಸ್ಮರಿಸುತ ನೆನದು ತುಂಬಿ ಮನ..



ಪ್ರೀತಿಯಿಂದ ಜಗವ ಗೆದ್ದಿರಿ....ನಗು ನಗುತ

ಅನುಕರಣೀಯ ನಿಮ್ಮ ಜೀವನ ಎನುತ


ಕೊನೆಯಲ್ಲೂ ಸಾರ್ಥಕತೆಯ ಭಾವ

ನಾಲ್ಕು ಕಣ್ಣುಗಳಿಗೆ ಬೆಳಕಾದ ಜೀವ


ಜನಮಾನಸದಲ್ಲಿ ಉಳಿದಿರಿ ಪ್ರೀತಿಯ ಅಪ್ಪುಗೆಯಲಿ

ಕಾಲದ ವರೆಗೂ ಕಾಲವಾಗದ ವ್ಯಕ್ತಿತ್ವ..ಒಪ್ಪಿಗೆಯಲಿ


ನಗುಮೊಗದೊಡೆಯನ ಜನುಮದಿನ

ಸ್ಮರಿಸುತ ನೆನದು ತುಂಬಿ ಮನ..


-ಪಂಚಾಕ್ಷರಿ ಹಿರೇಮಠ ಮ್ಯಾಕಲಝರಿ(ಗದಗ)







Comments

Popular posts from this blog

ಓ ಮನವೇ ಕುಗ್ಗದಿರು