Posts

ನಗುಮೊಗದೊಡೆಯನಿಗೆ ಪ್ರೀತಿಯ ಅಪ್ಪುಗೆ

ನಗುಮೊಗದೊಡೆಯನ ಜನುಮದಿನ ಸ್ಮ ರಿಸುತ ನೆನದು ತುಂಬಿ ಮನ.. ನಡೆ‌ ನುಡಿ ಗಳಲ್ಲೂ ಸರಳತೆಯನ್ನ ಸಾರಿದ ಕರುನಾಡ ಪ್ರೇಮದ ಕಾಣಿಕೆಯನ್ನ ಕಳೆದುಕೊಂಡ ಮನಗಳು ಹುಡುಕುವು ಪ್ರತಿಕ್ಷಣ ನಿಮ್ಮ ನಗುಮೊಗವನ್ನ. ನೀತಿಗಳ ಪಾಠ ನೀವು...ಮೌಲ್ಯಗಳ ಸಾರ ತುಂಬಿದ ಕೊಡದ ಹಾಗೆ...ತುಳುಕಾಡದ ಕುವರ ಕರುನಾಡಲೆಂದು‌‌ ನಿಮ್ಮ ನೆನಪು‌ ಅಮರ ಇರುವವರೆಗೂ‌ ಆ ಸೂರ್ಯ ಚಂದಿರ. ನಗುಮೊಗದೊಡೆಯನ ಜನುಮದಿನ ಸ್ಮರಿಸುತ ನೆನದು ತುಂಬಿ ಮನ.. ಪ್ರೀತಿಯಿಂದ ಜಗವ ಗೆದ್ದಿರಿ....ನಗು ನಗುತ ಅನುಕರಣೀಯ ನಿಮ್ಮ ಜೀವನ ಎನುತ ಕೊನೆಯಲ್ಲೂ ಸಾರ್ಥಕತೆಯ ಭಾವ ನಾಲ್ಕು ಕಣ್ಣುಗಳಿಗೆ ಬೆಳಕಾದ ಜೀವ ಜನಮಾನಸದಲ್ಲಿ ಉಳಿದಿರಿ ಪ್ರೀತಿಯ ಅಪ್ಪುಗೆಯಲಿ ಕಾಲದ ವರೆಗೂ ಕಾಲವಾಗದ ವ್ಯಕ್ತಿತ್ವ..ಒಪ್ಪಿಗೆಯಲಿ ನಗುಮೊಗದೊಡೆಯನ ಜನುಮದಿನ ಸ್ಮರಿಸುತ ನೆನದು ತುಂಬಿ ಮನ.. -ಪಂಚಾಕ್ಷರಿ ಹಿರೇಮಠ ಮ್ಯಾಕಲಝರಿ(ಗದಗ)

ಓ ಮನವೇ ಕುಗ್ಗದಿರು

  ಮುಗಿಲಿನ ನೀಲಿ ಚೆದುರಿದ ಮನವೆ ಕಾ ಮನಬಿಲ್ಲಿನೊಳು ಕರಗಿದ ಮನವೇ ಬಿಳಿಯಾಚೆಗಿನ ಬದುಕ ಹಂಬಲವೇ? ವಿಶ್ವಮಾನವನಾದೊಡೆ ‌ನಿನದಲ್ಲವೆ ಬಳಲದಿರು,ಬೆಂಡಾಗದಿರು,ಸಾಗುತಿರು ಮುನ್ನುಗ್ಗುತ್ತಿರು....ದಿನ ನೀಲಿ ಆಟದಲಿ ಚದುರುತ್ತಿರು...ಕರಗುತ್ತಿರು... ಓಡುತ್ತಿರು... ಎದ್ದು ನಿಲ್ಲುತ್ತಿರು...ತಲೆ ಎತ್ತುತ್ತಿರು.. ನಿನ್ನಯ ತನವ ಬಿಡದಿರು ವಿಶ್ವ ಪಥ ಹಾದಿಯಲಿ ಸಾಗುತ್ತಿರು..         -ಪಂಚಾಕ್ಷರಿ ಹಿರೇಮಠ